ಮುಂಬೈ: ಮಾಡೆಲ್ ಆಗಬೇಕೆಂದು ಆಸೆ ಹೊತ್ತು ರಾಜಸ್ಥಾನದಿಂದ ಮುಂಬೈಗೆ ಬಂದಿದ್ದ ಉದಯೋನ್ಮುಖ ಮಾಡೆಲ್ ಮೃತದೇಹ ಅನುಮಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.ಮಾನ್ಸಿ ದೀಕ್ಷಿತ್ ಎಂಬ ಮಾಡೆಲ್ ಮೃತದೇಹ ಸೂಟ್ ಕೇಸ್ ನಲ್ಲಿ ತುಂಬಿಡಲಾಗಿತ್ತು. ಈಕೆಯನ್ನು ಗೆಳೆಯ ಮುಝಾಮಿಲ್ ಸಯ್ಯದ್ ಎಂಬಾತ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.ಈತನನ್ನು ಬಂಧಿಸಿ ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ಇತ್ಯಾದಿ ಸಾಕ್ಷ್ಯಗಳ ಪರಿಶೀಲನೆಯ ನಂತರ ಸಯ್ಯದ್ ನೇ ಈ ಕೊಲೆ ಮಾಡಿರಬಹುದು ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.ತಾಜಾ