ನವದೆಹಲಿ: ಡೇರಾ ಸಚ್ಚಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ನಂತೆ ಸ್ವಯಂ ಘೋಷಿತ ದೇವಮಾನವ ಎಂದು ಜನರನ್ನು ಮರಳು ಮಾಡುತ್ತಿದ್ದ ಅಸ್ಸಾರಾಂ ಬಾಪು ಪ್ರಕರಣದ ಸತ್ಯಗಳು ಹೊರಬರುತ್ತಿವೆ. ಡೇರಾ ಬಾಬಾನಂತೆ ಅಸ್ಸಾರಾಂ ಬಾಪು ಕೂಡಾ ಹಲವು ಅತ್ಯಾಚಾರ, ಅಕ್ರಮದಲ್ಲಿ ಭಾಗಿಯಾಗಿದ್ದ. ಈತ ಈಗ ಜೈಲಿನಲ್ಲಿದ್ದಾನೆ. ಆದರೆ ಆತನ ವಿರುದ್ಧ ದೂರು ನೀಡಿದವರು ಕೇಸು ಹಿಂಪಡೆಯಲು ಒತ್ತಡ ಎದುರಿಸುತ್ತಿದ್ದಾರೆಂಬುದು ಬೆಳಕಿಗೆ ಬಂದಿದೆ.ಈತನ ವಿರುದ್ಧ ಸಾಕ್ಷಿ ಹೇಳಿದವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ,