ಚೆನ್ನೈ : ಖ್ಯಾತ ಪತ್ರಕರ್ತ, ತುಘಲಕ್ ಮ್ಯಾಗಜೀನ್ ಸಂಪಾದಕ ಎಸ್.ಗುರುಮೂರ್ತಿ ಮೇಲೆ 9 ಮಂದಿ ದುಷ್ಕರ್ಮಿಗಳು ದಾಳಿಗೆ ಯತ್ನಿಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ. ಚೆನ್ನೈ ನಲ್ಲಿರೋ ಗುರುಮೂರ್ತಿ ನಿವಾಸದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ 9 ಮಂದಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ದಾಳಿಗೆ ಯತ್ನಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿಗಳು ದುಷ್ಕರ್ಮಿಗಳ ದಾಳಿ ತಡೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚೆನ್ನೈ ಪೊಲೀಸರು ತನಿಖೆ ಶುರು ಮಾಡಿದ್ದು, ಆರೋಪಿಗಳ