ಪ್ರವಾಸಕ್ಕೆಂದು ಬಂದ ಯುವತಿಯ ಮಾನಭಂಗ ಮಾಡಿದ ಆಟೋರಿಕ್ಷಾ ಚಾಲಕ!

ಮಹಾರಾಷ್ಟ್ರ| pavithra| Last Updated: ಬುಧವಾರ, 30 ಡಿಸೆಂಬರ್ 2020 (07:21 IST)
: 26 ವರ್ಷದ ಆಟೋರಿಕ್ಷಾ ಚಾಲಕನೊಬ್ಬ 18 ವರ್ಷದ ಪ್ರವಾಸಿ ಯುವತಿಯ ಮೇಲೆ ಮಾನಭಂಗ ಎಸಗಿದ ಘಟನೆ ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯ ಪನ್ವೆಲ್ ಬಳಿಯ ಹಳ್ಳಿಯಲ್ಲಿ ನಡೆದಿದೆ.

ಕ್ರಿಸ್ ಮಸ್ ಮತ್ತು ಆಚರಿಸಲು ಆಕೆ ಮುಂಬೈಗೆ ಭೇಟಿ ನೀಡಿದ್ದಳು. ಆ ವೇಳೆ ಅವಳು ಗಾಂಧಿ ಗಾರ್ಡನ್ ಪ್ರದೇಶಕ್ಕೆ ಹೋಗಲು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಚಾಲಕ  ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ತಲೆಗೆ ಕಲ್ಲಿನಿಂದ ಹೊಡೆಯುವುದಾಗಿ ಬೆದರಿಕೆ ಹಾಕಿ ಮಾನಭಂಗ  ಎಸಗಿದ್ದಾನೆ.

ಈ ಬಗ್ಗೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು  ತನಿಖೆ ನಡೆಸಿ ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :