ಮುಂಬೈ : ಆಟೋರಿಕ್ಷಾ ಚಾಲಕನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿದ್ದು, ಚಾಲಕ ಸಾವಿಗೀಡಾದ ಘಟನೆ ಉತ್ತರ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ.ದಾಬುನಗರದಲ್ಲಿ 10 ದಿನಗಳ ಹಿಂದೆ ನಿಲ್ಲಿಸಿದ್ದ ತಮ್ಮ ಆಟೋರಿಕ್ಷಾವನ್ನು ಒಮ್ಮೆ ನೋಡಿ ಬರಲು ಚಾಲಕ ಶಾರುಕ್ ಶೇಖ್ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಕಳ್ಳನೆಂದು ಭಾವಿಸಿ ಸ್ಥಳೀಯ ನಿವಾಸಿಗಳ ಗುಂಪೊಂದು ಥಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಲ್ಲಿಯೇ ಸಮೀಪದ ಸ್ಥಳವೊಂದರಲ್ಲಿ ಎಸೆದು ಹೋಗಲಾಗಿತ್ತು. ಈ ಬಗ್ಗೆ ದಾರಿಹೋಕರು ನೀಡಿದ್ದ ಮಾಹಿತಿಯ