ಅಟೋ ಚಾಲಕನಿಗೆ ಒಂದೇ ದಿನ ಇಬ್ಬರು ಯುವತಿಯರೊಂದಿಗೆ ವಿವಾಹವಾಗಿರುವುದು ಪ್ರತಿಯೊಬ್ಬರಿಗು ಅಚ್ಚರಿ ಮೂಡಿಸಿದೆ. ಹಣವಿದ್ದವರು ಕೂಡಾ ಒಂದೇ ಹೆಂಡತಿಯನ್ನು ಸಾಕಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಅಟೋ ಚಾಲಕನ ಧೈರ್ಯ ಮೆಚ್ಚಬೇಕಾದುದ್ದೆ. ತಮಿಳುನಾಡಿನ ತಿರುಪುರ್ ಜಿಲ್ಲೆಯ ತಾರಾಪುರ ಹತ್ತಿರವಿರುವ ಪುದುಕೊಟ್ಟೆಮೆಡು ಗ್ರಾಮದ ನಿವಾಸಿಯಾಗಿರುವ ಅಟೋ ಚಾಲಕ, ಪ್ರತಿನಿತ್ಯ ತನ್ನ ಅಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಪ್ರೇಮಿಸಿದ್ದಾನೆ. ಕಳೆದ ತಿಂಗಳು 29 ರಂದು ಯುವತಿ ಕಾಣೆಯಾಗಿದ್ದಾಳೆ. ಯುವತಿಯ ಪೋಷಕರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.