ಲಕ್ನೋ: ವಿವಾದಿತ ಹೇಳಿಕೆಗಳನ್ನೇ ನೀಡುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತೊಮ್ಮೆ ತಮ್ಮ ಹುಳುಕು ನಾಲಿಗೆ ಹರಿಯಬಿಟ್ಟಿದ್ದಾರೆ. ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಧ್ವಂಸಗೊಳಿಸಿದರೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ಮಾಜಿ ಸಚಿವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.ಕೆಂಪುಕೋಟೆ, ತಾಜ್ ಮಹಲ್, ಕುತುಬ್ ಮೀನಾರ್ ದೇಶದ ಹೆಮ್ಮೆಯ ಸ್ಮಾರಕಗಳು ಎಂದೇ ನಾವು ಪರಿಗಣಿಸುತ್ತೇವೆ. ಆದರೆ ಅಜಂ ಖಾನ್ ಪ್ರಕಾರ ಇದೆಲ್ಲಾ ಗುಲಾಮಗಿರಿಯ