ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಬಾ ರಾಮ್ ರಹೀಮ್ ಆಶ್ರಮದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಭಂಡಾರವೇ ಪತ್ತೆಯಾಗಿದೆ. ನಗರದಲ್ಲಿರುವ ಬಾಬಾ ಆಶ್ರಮವನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆಶ್ರಮವನ್ನು ಪರಿಶೀಲನೆ ನಡೆಸಿದಾಗ ಭಾರಿ ಪ್ರಮಾಣದ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಗಳು ಕಂಡುಬಂದಿವೆ. ನೂರಾರು ಎಕರೆ ಭೂಮಿ ಹೊಂದಿರುವ ಆಶ್ರಮದ ಸಂಪೂರ್ಣ ತನಿಖೆ ನಡೆಸಿದಾಗ ಐಷಾರಾಮಿ ಕೊಠಡಿಗಳು, ವಿದೇಶಿ ವಸ್ತುಗಳು ಪತ್ತೆಯಾಗಿವೆ.