ಯೋಗ ಗುರು ಬಾಬಾ ರಾಮದೇವ್ ಅವರ ದಂಗಲ್ ಕಥೆ ಇದು. ಯೋಗದ ಶಕ್ತಿ ಏನೆಂದು ತೋರಿಸುತ್ತೇನೆ ಎಂದು ಒಲಿಂಪಿಕ್ ವಿಜೇತ ಕುಸ್ತಿ ಪಟು ಆಂಡ್ರಿ ಸ್ಟಾಡ್ನಿಕ್ ಅವರಿಗೆ ಮಣ್ಣುಮುಕ್ಕಿಸಿದ್ದಾರೆ. 2008 ಇಸವಿಯಲ್ಲಿ ನಡೆದ ಒಲಿಂಪಿಕ್ಸ್ ಸ್ಪರ್ಧೆಯ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಭಾರತದ ಕುಸ್ತಿ ಪಟು ಸುಶೀಲ್ ಕುಮಾರ್ ಅವರನ್ನು ಪರಾಭವಗೊಳಿಸಿದ್ದ ಉಕ್ರೇನ್ನ ಕುಸ್ತಿ ಪಟು ಆಂಡ್ರಿ ಸ್ಟಾಡ್ನಿಕ್ ಅವರಿಗೆ ತನ್ನ ಜತೆ ಸೆಣಸಾಡುವಂತೆ ಯೋಗ ಗುರು ಚಾಲೆಂಜ್ ಮಾಡಿದ್ದರು.