ದೆಹಲಿ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಮಮತಾ ಬ್ಯಾನರ್ಜಿಯವರು ಸುದ್ದಿಗೋಷ್ಠಿ ನಡೆಸುವಾಗ ರಾಷ್ಟ್ರಗೀತೆಯನ್ನೇನೋ ಹಾಡಿದರು. ಆದರೆ ಅದನ್ನು ಪೂರ್ತಿಗೊಳಿಸಲಿಲ್ಲ ಮತ್ತು ಮಧ್ಯದಲ್ಲಿಯೇ ಉಳಿತುಕೊಂಡರು ಎಂದು ಬಿಜೆಪಿ ಹೇಳಿದೆ. ಹಾಗೇ, ಮುಂಬೈನಲ್ಲಿ ನಡೆದ ಈ ಸುದ್ದಿಗೋಷ್ಠಿಯ ವಿಡಿಯೋವನ್ನೂ ಶೇರ್ ಮಾಡಿಕೊಂಡಿದೆ. ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕ, ಮಮತಾ ಬ್ಯಾನರ್ಜಿ ಮೊದಲು ಕುಳಿತುಕೊಂಡೇ ರಾಷ್ಟ್ರಗೀತೆ ಹಾಡಲು ಶುರು