ಸಾಲ ನೀಡುವುದಾಗಿ ಭರವಸೆ ನೀಡಿ ಹುಡುಗಿಯನ್ನು ಹುರಿದು ಮುಕ್ಕಿದ ಬ್ಯಾಂಕ್ ಮ್ಯಾನೇಜರ್

ಇಂದೋರ್| pavithra| Last Updated: ಮಂಗಳವಾರ, 26 ಜನವರಿ 2021 (07:57 IST)
ಇಂದೋರ್ : ಶಿಕ್ಷಣ ಸಾಲವನ್ನು ನೀಡುವುದಾಗಿ ಭರವಸೆ ನೀಡಿ 16 ವರ್ಷದ ಹುಡುಗಿಯನ್ನು ಬ್ಯಾಂಕ್ ಮ್ಯಾನೇಜರ್  ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಸಂತ್ರಸ್ತೆಗೆ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತೆಯ ಮೂಲಕ ಆರೋಪಿಯ ಪರಿಚಯವಾಗಿದೆ. ಆಕೆ ಶಿಕ್ಷಣ ಪಡೆಯಲು ಬಯಸಿದ್ದರಿಂದ ಬ್ಯಾಂಕ್ ಮ್ಯಾನೇಜರ್ ಜೊತೆ ಸ್ನೇಹ ಬೆಳೆಸಿದ್ದಳು. ಆಕೆಯನ್ನು ಹೋಟೆಲ್ ಗೆ ಕರೆದೊಯ್ದು ಮಾನಭಂಗ ಎಸಗಿದ್ದಾನೆ. ಕೃತ್ಯವನ್ನು ಚಿತ್ರೀಕರಿಸಿ ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಪದೇ ಪದೇ ಮಾನಭಂಗ ಎಸಗಿದ್ದಾನೆ.

ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :