ಹೈದರಾಬಾದ್: ಕೈಯಲ್ಲಿ ಹಣವಿಲ್ಲ ಎಂದರೆ ಭಿಕ್ಷಾಟನೆಗಿಳಿಯುವವರಿದ್ದಾರೆ. ಆದರೆ ಇಲ್ಲೊಬ್ಬ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಬಳಿ ಪೊಲೀಸರು 2 ಲಕ್ಷ ರೂ. ಪತ್ತೆ ಹಚ್ಚಿದ್ದಾರೆ.ಹೈದರಾಬಾದ್ ನಗರದಲ್ಲಿ ಭಿಕ್ಷಾಟನೆ ನಿರ್ಮೂಲನೆ ಮಾಡುವ ಅಭಿಯಾನದ ಅಂಗವಾಗಿ 70 ವರ್ಷದ ವೃದ್ಧೆಯನ್ನು ಬಂಧಿಸಿದ ಪೊಲೀಸರಿಗೆ ಆಕೆಯ ಬಳಿಯಿದ್ದ ಹಣ ನೋಡಿ ನಿಜಕ್ಕೂ ಅಚ್ಚರಿಯಾಯಿತು.ಸುಮಾರು 2,34,320 ರೂ. ನಗದು, ಬಳೆ, ಬೆಳ್ಳಿ ಮಾಲೆಯೂ ಆಕೆಯ ಬಳಿಯಿದ್ದ ಚೀಲದಲ್ಲಿ ಪತ್ತೆಯಾಗಿದೆ. ಈ ಹಣ ಆಕೆಗೆ ಭಿಕ್ಷಾಟನೆಯಿಂದ ಬಂದಿದ್ದಲ್ಲವಂತೆ. ಆಕೆ