ನವದೆಹಲಿ : ಆನ್ಲೈನ್ ಬೆಟ್ಟಿಂಗ್ ಪ್ಲಾಟ್ಫಾರ್ಮ್ಗಳ ಕುರಿತಾದ ಜಾಹೀರಾತುಗಳ ವಿಚಾರವಾಗಿ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ. ಮಾಧ್ಯಮಗಳು ತಕ್ಷಣ ಇಂತಹ ಜಾಹೀರಾತುಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ರವಾನಿಸಿದೆ.ಟಿವಿ ಚಾನೆಲ್ಗಳು, ಡಿಜಿಟಲ್ ಮೀಡಿಯಾ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಬೆಟ್ಟಿಂಗ್ ಹಾಗೂ ಜೂಜು ಸಂಬಂಧಿತ ಜಾಹೀರಾತುಗಳನ್ನು ತಡೆಯುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದೆ.ಇಂತಹ ಜಾಹೀರಾತುಗಳಿಗೆ ಪಾವತಿಸಲು ಕಪ್ಪು ಹಣ ಬಳಕೆಯಾಗುವ