ದೆಹಲಿ ಚುನಾವಣೆಗೆ ಮುನ್ನ ಕಾಂಗ್ರೆಸ್ ಗೆ ಬಿಗ್ ಶಾಕ್

ನವದೆಹಲಿ| pavithra| Last Modified ಮಂಗಳವಾರ, 14 ಜನವರಿ 2020 (06:31 IST)
ನವದೆಹಲಿ : ದೆಹಲಿ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಲ್ಲೇ  ಕಾಂಗ್ರೆಸ್ ನ ಮತ್ತಿಬ್ಬರು ನಾಯಕರು ಎಎಪಿ ಪಕ್ಷ ಸೇರುವ ಮೂಲಕ ಕಾಂಗ್ರೆಸ್ ಗೆ ಬಿಗ್ ಶಾಕ್ ನೀಡಿದ್ದಾರೆ.ಕಳೆದ ವಾರ ಕಾಂಗ್ರೆಸ್ ನ ಐವರು ನಾಯಕರು ಪಕ್ಷ ತೊರೆದಿದ್ದರು. ಇದೀಗ ಕಾಂಗ್ರೆಸ್ ನಾಯಕ ವಿನಯ್ ಮಿಶ್ರಾ ಮತ್ತು ರಾಮ್ ಸಿಂಗ್ ನೇತಾಜಿ ಕಾಂಗ್ರೆಸ್ ಪಕ್ಷ ತೊರೆದು ನಿನ್ನೆ ಸಿಎಂ ಅರವಿಂದ್ ಕ್ರೇಜಿವಾಲ್ ಸಮ್ಮುಖದಲ್ಲಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.


ಆಪ್ ಸರ್ಕಾರದ ಕಾರ್ಯಕ್ರಮದಿಂದ ಪ್ರೇರಿತರಾಗಿ ಪಕ್ಷಕ್ಕೆ ಸೇರ್ಪೆಡೆಯಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಹಾಗೇ ಇವರ ಜೊತೆ ಮತ್ತಿಬ್ಬರು ನಾಯಕರಾದ ಜೈ ಭಗವಾನ್ ಮತ್ತು ನವೀನ್ ದಿಪು ಚೌದರಿ ಕೂಡ ಆಪ್ ಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :