ಮೋದಿ ಕುತ್ತಿಗೆ ಸೀಳಲು ರೆಡಿಯಾಗಿದ್ದಾರೆ ಬಿಹಾರಿಗಳು!

ನವದೆಹಲಿ| Krishnaveni| Last Modified ಗುರುವಾರ, 23 ನವೆಂಬರ್ 2017 (09:45 IST)
ನವದೆಹಲಿ: ಪ್ರಧಾನಿ ಮೋದಿ ಕುತ್ತಿಗೆ ಸೀಳಲು ಮತ್ತು ಕೈಕತ್ತರಿಸಲು ಬಿಹಾರದಲ್ಲಿ ಹಲವು ಮಂದಿ ಸಿದ್ಧರಾಗಿ ಕಾಯುತ್ತಿದ್ದಾರೆ ಎಂದು ಮಾಜಿ ಸಿಎಂ ರಾಬ್ರಿ ದೇವಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಮೋದಿ ವಿರುದ್ಧ ಕೈ ಬೆರಳು ತೋರಿಸಿದವರ ಬೆರಳು ಕತ್ತರಿಸಲಾಗುವುದು ಎಂದು ಬಿಜೆಪಿ ಸಂಸದ ನಿತ್ಯಾನಂದ ರಾಯ್ ನೀಡಿದ್ದ ಹೇಳಿಕೆ ಬೆನ್ನಲ್ಲೇ ರಾಬ್ರಿ ದೇವಿ ಇಂತಹದ್ದೊಂದು ಉಗ್ರ ಹೇಳಿಕೆ ನೀಡಿದ್ದಾರೆ.


‘ಮೋದಿ ಕಡೆ ಕೈ ತೋರಿದವರನ್ನು ಬೆರಳು ಕತ್ತರಿಸಲಾಗುವುದು ಎಂದು ಹೇಳಿಕೊಂಡಿರುವುದನ್ನು ಕೇಳಿಕೊಂಡು ಬಿಹಾರಿಗಳು ಸುಮ್ಮನಿರುವುದಿಲ್ಲ. ಕೈ ಕತ್ತರಿಸಲು ತಯಾರಾಗಿದ್ದಾರೆ’ ಎಂದು ರಾಬ್ರಿ ದೇವಿ ತಿರುಗೇಟು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :