ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರಿ ಮುಂಚೂಣಿಯಲ್ಲಿರುವ ಮೈಕ್ರೋಸಾಫ್ಟ್ ಪೋಷಿತ ‘ಚಾಟ್ ಜಿಪಿಟಿ’ಗೆ ಪ್ರತಿಯಾಗಿ ಗೂಗಲ್ನಿಂದ ‘ಬರ್ಡ್’ ಎಂಬ ಸೇವೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಸಂಸ್ಥೆಯ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಈ ಕುರಿತಾಗಿ ಬ್ಲಾಗ್ನಲ್ಲಿ ಬರೆದಿರುವ ಅವರು, ಸಂವಹನ ನಡೆಸುವಂತಹ ಕೃತಕ ಬುದ್ಧಿಮತ್ತೆ ಸೇವೆಯನ್ನು ಜನರಿಗೆ ನೀಡುವ ಮೊದಲು ವಿಶ್ವಾಸಾರ್ಹ ಪರೀಕ್ಷಕರಿಂದ ಪರೀಕ್ಷಿಸಲಾಗುವುದು. ಬಳಿಕ ಆದಷ್ಟು ಶೀಘ್ರ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಗೂಗಲ್ ತಯಾರಿಸುತ್ತಿರುವ ‘ಬರ್ಡ್’, ನಾಸಾದ