ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿದ್ದು, ಬಿಜೆಪಿ ಉತ್ತಂಗ ಸ್ಥಿತಿಯಲ್ಲಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಪಕ್ಷದಿಂದಾಗಿ ಜನಪ್ರಿಯತೆ ದೊರೆತಿದೆ ಎನ್ನುವುದನ್ನು ಪಕ್ಷದ ಕಾರ್ಯಕರ್ತರು ಮರೆಯಬಾರದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಿವಿಮಾತು ಹೇಳಿದ್ದಾರೆ.