ದೇಶದ ಸಂವಿಧಾನದ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ರಾಜಕೀಯ ಅನುಕೂಲಕ್ಕಾಗಿ ಸುಳ್ಳನ್ನು ಬಳಸಿಕೊಳ್ಳುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ಚುನಾವಣೆಗಳಲ್ಲಿ ಸೋಲು ಕಂಡಿರಬಹುದು ಆದರೆ, ನಾವು ಎಂದಿಗೂ ಸತ್ಯವನ್ನು ಬಿಟ್ಟುಕೊಟ್ಟಿಲ್ಲ. ಸತ್ಯ ಕಾಂಗ್ರೆಸ್ನ ಮುಖ್ಯ ಧ್ಯೇಯವಾಗಿದ್ದರೆ, ರಾಜಕೀಯ ಪ್ರಯೋಜನಗಳಿಗಾಗಿ ಬಿಜೆಪಿ ಸುಳ್ಳಿನ ಕಂತೆಗಳನ್ನು ಸೃಷ್ಟಿಸುತ್ತಿದೆ ಎಂದು ದೂಷಿಸಿದ್ದಾರೆ.