ನವದೆಹಲಿ : ದೇಶದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಕಾನೂನು ವ್ಯವಸ್ಥೆಯ ಸವಾಲುಗಳ ವಿರುದ್ಧ ಹೋರಾಡಲು ಬಿಜೆಪಿ ನಿರ್ಧರಿಸಿದೆ. ಅದಕ್ಕಾಗಿ ಭಗವಾನ್ ಹನುಮನಿಂದ ಸ್ಫೂರ್ತಿ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ 44ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ಹನುಮನಿಂದ ಬಿಜೆಪಿ ಸ್ಫೂರ್ತಿ ಪಡೆದಿದೆ. ಭಕ್ತಿ, ಶಕ್ತಿ ಮತ್ತು ಧೈರ್ಯಕ್ಕಾಗಿ ಪೂಜಿಲ್ಪಟ್ಟಿದೆ. ಹನುಮನಂತೆ ಇಂದು ಭಾರತ ವಿಶ್ವದ ಸವಾಲುಗಳನ್ನ