ತಿರುವನಂತಪುರಂ: ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೆಲವು ಸ್ಥಾನಗಳನ್ನಾದರೂ ಗೆದ್ದು ಕಿಂಗ್ ಮೇಕರ್ ಆಗುವ ಕನಸಿದೆ. ಕೇರಳದಲ್ಲಿ ಇದುವರೆಗೆ ಬಿಜೆಪಿ ಸಾಧನೆ 1 ಸ್ಥಾನಕ್ಕಿಂತ ಹೆಚ್ಚಾಗಿಲ್ಲ. ಆದರೆ ಈ ಬಾರಿ ಮೂರ್ನಾಲ್ಕು ಸ್ಥಾನಗಳನ್ನಾದರೂ ಗೆದ್ದು ಕಿಂಗ್ ಮೇಕರ್ ಆಗಲು ಶತ ಪ್ರಯತ್ನ ನಡೆಸಿದೆ. ಇದಕ್ಕಾಗಿ ಸ್ವತಃ ಬಿಜೆಪಿಯ ಚಾಣಕ್ಷ್ಯ ಅಮಿತ್ ಶಾ ದೇವರ ನಾಡಿಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರತೀ ಬಾರಿಯೂ ಕೇರಳದಲ್ಲಿ ಎಲ್ ಡಿಎಫ್ ಮತ್ತು ಯುಡಿಎಫ್