Normal 0 false false false EN-US X-NONE X-NONE ನವದೆಹಲಿ : ಎರಡನೇ ಬಾರಿ ಕೇಂದ್ರದ ಅಧಿಕಾರ ಪಡೆದ ಬಿಜೆಪಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಈ ಕೊರೊನಾ ಭೀತಿ ನಡುವೆಯೂ ವರ್ಚ್ಯುಯಲ್ ಸಮಾವೇಶಗಳನ್ನು ನಡೆಸಲು ನಿರ್ಧರಿಸಿದೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಘಟಕಗಳೊಂದಿಗೆ ಸಮಾಲೋಚನೆ ನಡೆಸಿದ್ದು, ದೇಶಾದ್ಯಂತ 750 ರಾಜ್ಯ ಘಟಕಗಳು ತಲಾ 1 ಸಾವಿರ ವರ್ಚ್ಯುಯಲ್ ಸಮಾವೇಶಗಳನ್ನು ಮಾಡುವಂತೆ ಸೂಚಿಸಲಾಗಿದೆ.