ನವದೆಹಲಿ: ದೇಶವೇ ಜನ ಸಂಖ್ಯೆ ಹೆಚ್ಚಳದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರೆ ಬಿಜೆಪಿ ಶಾಸಕರೊಬ್ಬರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುತ್ತಾ ಇರಿ ಎಂದು ಮಹಿಳೆಯರಿಗೆ ಸಲಹೆ ಕೊಟ್ಟಿದ್ದಾರೆ! ಮುಝಾಫರ್ ನಗರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಈ ಸಲಹೆ ಕೊಟ್ಟ ಮಹಾನುಭಾವ! ಹಿಂದೂಗಳು ಹೆಚ್ಚು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು. ಜನನ ನಿಯಂತ್ರಣದ ಬಗ್ಗೆ ಹೊಸ ಕಾನೂನು ಬರುವವರೆಗೂ ಮಕ್ಕಳನ್ನು ಹೆರುತ್ತಾ ಇರು ಎಂದು ಪತ್ನಿಗೂ ಹೇಳಿದ್ದೇನೆ ಎಂದು ವಿಕ್ರಮ್ ಸೈನಿ