ಕೋಲ್ಕತ್ತಾ: ಕೆಲವು ದುಷ್ಕರ್ಮಿಗಳು ಬಿಜೆಪಿ ಮುಖಂಡನೊಬ್ಬನ ಮನೆಗೆ ನುಗ್ಗಿ ಆತನ 22 ವರ್ಷದ ಮಗಳನ್ನು ಕಿಡ್ನ್ಯಾಪ್ ಮಾಡಿದ ಘಟನೆ ಪಶ್ಚಿಮ ಬಂಗಾಳದ ಬರ್ಬಮ್ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ಮುಖಂಡ ಸುಪ್ರಬಾತ್ ಈ ಹಿಂದೆ ಟಿಎಂಸಿಯಲ್ಲಿದಿದ್ದರು. ನಂತರ ಕಳೆದ ಐದು ತಿಂಗಳ ಹಿಂದೆಯಷ್ಟೇ ಭಾರತೀಯ ಜನತಾ ಪಕ್ಷ ಸೇರಿಕೊಂಡಿದ್ದರು. ಆದರೆ ಅವರು ಮನೆಯಲ್ಲಿಲ್ಲದ ವೇಳೆ ಬೆಳಗ್ಗೆ 8ಗಂಟೆಗೆ ಕೆಲ ದುಷ್ಕರ್ಮಿಗಳು ಬಾಗಿಲು ಒಡೆದು ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದವರಿಗೆ ಬಂದೂಕಿನಿಂದ ಬೆದರಿಸಿ ಮುಖಂಡನ