ಜನರಲ್ ಪವರ್ ಆಫ್ ಅಟಾರ್ನಿ(GPA)ಯನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಚಿತ್ರದುರ್ಗ ಜಿಲ್ಲೆ ಹೊಳಲ್ಕರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಹಾಗೂ ಕುಟುಂಬಸ್ಥರ ವಿರುದ್ದ ದೂರು ದಾಖಲಾಗಿದೆ. ಎಂ.ಜಿ.ಶ್ರೀಧರ್ ಎಂಬುವವರು ನಾಗರಾಜ್ ಎಂಬುವವರಿಗೆ ವ್ಯವಹಾರದ ಉದ್ದೇಶದ ಸಲುವಾಗಿ 2016ರಲ್ಲಿ GPA ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಿದ್ದರು. ಇದಕ್ಕೊಪ್ಪದ ಶ್ರೀಧರ್ ಸಹೋದರಿ ತಮ್ಮಗು ಆಸ್ತಿಯಲ್ಲಿ ಪಾಲಿದೆ ಎಂದು ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ವಿಚಾರಣೆ ನಡೆಯುವ ಸಮಯದಲ್ಲಿ ಶ್ರೀಧರ್ ಅನಾರೋಗ್ಯದಿಂದ