ನವದೆಹಲಿ: ಪ್ರಧಾನಿ ಮೋದಿ ಭಗವಾನ್ ಶ್ರೀರಾಮಚಂದ್ರ, ಅಮಿತ್ ಶಾ ಲಕ್ಷ್ಮಣ ಮತ್ತು ಸಿಎಂ ಯೋಗಿ ಹನುಮಾನ್ ಇದ್ದಂತೆ ಎಂದು ಬಿಜೆಪಿ ಶಾಸಕರೊಬ್ಬರು ಹೊಗಳಿದ್ದಾರೆ.ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಈ ಮಟ್ಟಿಗೆ ತಮ್ಮ ನಾಯಕರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಈ ಮೂವರು ಸೇರಿಕೊಂಡು ದೇಶದಲ್ಲಿ ರಾಮ ರಾಜ್ಯದ ಕನಸು ನನಸು ಮಾಡಿಯಾರು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ, ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿಯನ್ನು ಶೂರ್ಪನಖಿಗೆ ಈ ಶಾಸಕರು