ಪ್ರಧಾನಿ ಮೋದಿ ವಿರುದ್ಧ ಯಾರಾದರೂ ಕೈ ತೋರಿಸಿದಲ್ಲಿ ಅವರ ಕೈಗಳನ್ನು ಕತ್ತರಿಸಿಹಾಕುತ್ತೇವೆ ಎಂದು ಬಿಜೆಪಿ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಹಾರ್ನ ಉಜಿಯಾಪುರ್ ಲೋಕಸಭಾ ಕ್ಷೇತ್ರದ ಸಂಸದರಾದ ನಿತ್ಯಾನಂದ್ ರಾಯ್, ಪ್ರಧಾನಿ ಮೋದಿ ದೇಶವನ್ನು ಅಭಿವೃದ್ಧಿಯತ್ತ ಪಥದತ್ತ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕಾರ್ಯಕ್ಕೆ ಅಡ್ಡಿಯಾದಲ್ಲಿ ತಕ್ಕ ಶಿಕ್ಷೆ ವಿಧಿಸುತ್ತೇವೆ ಎಂದು ಗುಡುಗಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಯಾರೇ ಮಾತನಾಡಿದ್ರೂ ಅಥವಾ ಬೆರಳು ತೋರಿಸಿದರೂ ಅವರ ಬೆರಳುಗಳನ್ನು