ನವದೆಹಲಿ: ನೆಹರೂ ಮತ್ತು ಗಾಂಧೀಜಿ ಚಿಂತನೆಗಳನ್ನು ಹೇಳಿ ಜನರ ಮನದಲ್ಲಿ ಗೊಬ್ಬರ ತುಂಬಿಸಲಾಗಿದೆ ಎಂದು ಬಿಜೆಪಿ ಸಂಸದ ಕಾಮಾಕ್ಯ ಪ್ರಸಾದ್ ತಾಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಸ್ಸಾಂನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ಕಾಮಾಕ್ಯ ಜನರಿಗೆ ಧೀನದಯಾಳ್ ಉಪಾಧ್ಯಾಯರ ಚಿಂತನೆಗಳ ಬಗ್ಗೆ ಹೆಚ್ಚು ಗೊತ್ತಿಲ್ಲ. ಅದಕ್ಕೆ ಕಾರಣ ಅವರ ಮನಸ್ಸಲ್ಲಿ ಗಾಂಧೀಜಿ, ನೆಹರೂ ಅವರ ಚಿಂತನೆಗಳೆಂಬ ಗೊಬ್ಬರವನ್ನೇ ತುಂಬಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.ಇದೀಗ ವಿವಾದಕ್ಕೆ ಎಡೆಮಾಡಿದ್ದು, ಕಾಂಗ್ರೆಸ್ ಬಿಜೆಪಿ ಸಂಸದನ