ಚುನಾವಣೆ ಆಯೋಗದ ಕ್ರಮದ ಹಿಂದೆ ಕೇಂದ್ರ ಸರಕಾರದ ಒತ್ತಡ ಕಾರಣವಾಗಿದೆ. ಕೊನೆಯ ಗಳಿಗೆಯಲ್ಲಿ ಜನತೆಗೆ ಆಮಿಷವೊಡ್ಡಲು ಅವಕಾಶ ನೀಡಲಾಗಿದೆ ಎಂದು ವಿಪಕ್ಷಗಳು ಟೀಕಿಸುತ್ತಿರುವ ಸಂದರ್ಭದಲ್ಲಿಯೇ ವರುಣ್ ಗಾಂಧಿ ಹೇಳಿಕೆ ಹೊರಬಿದ್ದಿದೆ. ಕೇಂದ್ರ ಚುನಾವಣೆ ಆಯೋಗ ಹಲ್ಲಿಲ್ಲದ ಹುಲಿಯಂತೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ವೆಚ್ಚದ ವಿವರವನ್ನು ನೀಡದಿದ್ದರೂ ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಪಡಿಸುವುದಿಲ್ಲ, ಸಾಮಾನ್ಯ ಹಿನ್ನೆಲೆಯ ವ್ಯಕ್ತಿಗಳ ಸ್ಪರ್ಧಗೆ ಅವಕಾಶ ನೀಡುವುದಿಲ್ಲ.