ನವದೆಹಲಿ : ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಗೆ ಚಿಂತನ ಶಿಬಿರದ ಮೂಲಕ ತಯಾರಿ ಆರಂಭಿಸಿದ ಬೆನ್ನಲ್ಲೇ ಬಿಜೆಪಿಯೂ ತಯಾರಿ ಆರಂಭಿಸಿದ್ದು,ಇಂದಿನಿಂದ ಮೂರು ದಿನಗಳ ಕಾಲ ರಾಜಸ್ಥಾನದ ಜೈಪುರ್ನಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಸಲಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಹೈ ವೊಲ್ಟೇಜ್ ಮೀಟಿಂಗ್ ನಡೆಯಲಿದ್ದು,ಸಭೆಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಪ್ರಮುಖರು, ಮುಂಚೂಣಿ ಸಂಘಟನೆಗಳ ಮುಖ್ಯಸ್ಥರು, ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ 136 ಪದಾಧಿಕಾರಿಗಳು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ