ನವದೆಹಲಿ: ಪ್ರಧಾನಿ ಮೋದಿ ಆಡಳಿತ ವೈಖರಿ, ನೋಟು ನಿಷೇಧ ನಿರ್ಧಾರವನ್ನು ಹಿರಿಯ ಬಿಜೆಪಿ ನಾಯಕ, ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಮತ್ತೊಮ್ಮೆ ಟೀಕಿಸಿದ್ದಾರೆ. ಹಿಂದೊಮ್ಮೆ ಬಹಿರಂಗವಾಗಿ ಮೋದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಯಶವಂತ್ ಸಿನ್ಹಾ ಇದೀಗ ಮತ್ತೊಮ್ಮೆ ನೋಟು ನಿಷೇಧದ ನಿರ್ಧಾರವನ್ನು ಕೆದಕಿ ಪ್ರಧಾನಿ ಮೋದಿಯದ್ದು ತುಘಲಕ್ ನಿರ್ಧಾರ ಎಂದು ಜರೆದಿದ್ದಾರೆ.700 ವರ್ಷಗಳ ಹಿಂದೆ ದೆಹಲಿಯನ್ನು ಆಳಿದ್ದ ದೊರೆ ಮೊಹಮ್ಮದ್ ಬಿನ್ ತುಘಲಕ್ ಕೂಡಾ ನೋಟು