ನವದೆಹಲಿ: ರಾಹುಲ್ ಗಾಂಧಿ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಜನಿವಾರಧಾರಿ ಬ್ರಾಹ್ಮಣ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳಿ ವಿವಾದವೆಬ್ಬಿಸಿದ್ದನ್ನು ಇದೀಗ ಬಿಜೆಪಿ ಮತ್ತೆ ಕೆದಕಿದೆ.ಮಧ್ಯಪ್ರದೇಶದ ಉಜ್ಜೈನಿ ಮಹಾಕಾಳೇಶ್ವರ ದೇವಾಲಯಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ ಬೆನ್ನಲ್ಲೇ ಬಿಜೆಪಿ ರಾಹುಲ್ ಗೋತ್ರ ಯಾವುದು? ಅವರು ಜನಿವಾರ ಧರಿಸಿದ್ದರೇ? ಎಂದು ಲೇವಡಿ ಮಾಡಿದೆ.ಕೇಸರಿ ಭಯೋತ್ಪಾದಕರು ಎಂಬ ಪದ ಪ್ರಯೋಗಿಸಿದ್ದ ಇದೇ ರಾಹುಲ್ ಇದೀಗ ಚುನಾವಣೆ ಹಿನ್ನಲೆಯಲ್ಲಿ ಹಿಂದೂ ದೇವಾಲಯಗಳಿಗೆ