ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಕ್ಷೇತ್ರಗಳಾದ ರಾಯಬರೇಲಿ ಮತ್ತು ಅಮೇಥಿಗೆ ಪ್ರತಿ ವಾರ ಬಿಜೆಪಿಯ ಫೈರ್ಬ್ರ್ಯಾಂಡ್ ನಾಯಕರನ್ನು ಕಳುಹಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಸೋನಿಯಾ ರಾಹುಲ್ ಭದ್ರಕೋಟೆಗೆ ಲಗ್ಗೆ ಹಾಕಿದಲ್ಲಿ ಉಭಯ ನಾಯಕರಿಗೆ ದೇಶದ ಇತರ ಭಾಗಗಳಲ್ಲಿ ಪ್ರವಾಸ ಮಾಡಲು ಕಷ್ಟವಾಗುವುದಲ್ಲದೇ ತಮ್ಮ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ ಎನ್ನುವ ಉದ್ದೇಶ ಬಿಜೆಪಿ ಹೊಂದಿದೆ ಎನ್ನಲಾಗುತ್ತಿದೆ. ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್