ಬಿಜೆಪಿ ಯಾವತ್ತೂ ಮೋದಿ-ಶಾ ಪಕ್ಷವಾಗಲು ಬಿಡೋಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿ ಪಕ್ಷ ಸಿದ್ದಾಂತ ಕೇಂದ್ರಿಕೃತವಾಗಿದೆಯೇ ಹೊರತು ವೈಯಕ್ತಿಕ ಕೇಂದ್ರಿಕೃತವಾಗಿಲ್ಲ. ಬಿಜೆಪಿ ಪಕ್ಷ ಮೋದಿ-ಶಾ ಕೇಂದ್ರಿಕೃತವಾಗಿದೆ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತದ ಕೊರತೆಯಾಗಲಿದೆಯೇ ಎನ್ನುವ ಉಹಾಪೋಹಗಳನ್ನು ತಳ್ಳಿಹಾಕಿದ ಅವರು, ಕಳೆದ ಲೋಕಸಭೆ ಚುನಾವಣೆ ಫಲಿತಾಂಶಗಿಂತ ಹೆಚ್ಚಿನ ಸೀಟುಗಳಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ