ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ತಾಕತ್ತಿದ್ರೆ ಬ್ಯಾಲೆಟ್ ಪೇಪರ್ ತಂದು ಚುನಾವಣೆ ಗೆಲ್ಲಿ ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸವಾಲ್ ಹಾಕಿದ್ದಾರೆ. ವಿಪಕ್ಷಗಳ ಸೋಲಿಗೆ ಮತಯಂತ್ರಗಳೇ ಕಾರಣವಾಗಿವೆ. ಮತಯಂತ್ರಗಳನ್ನು ತಿರುಚಲಾಗಿದೆ. ಪಾಲಿಕೆ ಚುನಾವಣೆಯಲ್ಲಿ ಮತದಾರರೊಬ್ಬರು ತಮಗೇ ತಾವೇ ಹಾಕಿದ ಮತ ಕೂಡಾ ಕಾಣೆಯಾಗಿದ್ದೂ ಶೂನ್ಯ ಮತಗಳು ಎಂದು ತೋರಿಸುತ್ತಿರುವುದು ಸಾಬೀತಾಗಿದೆ ಎಂದು ಕಿಡಿಕಾರಿದರು. ಬಿಜೆಪಿಗೆ ತಾಕತ್ತಿದ್ರೆ ಮುಂಬರುವ ಲೋಕಸಭೆ ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ