ನವದೆಹಲಿ: ಬ್ಲೂ ವೇಲ್ ಗೇಮ್ಸ್..! ಇತ್ತೀಚೆಗೆ ಪೋಷಕರ ನಿದ್ದೆಗೆಡಿಸಿದ ಅಪಾಯಕಾರಿ ಮೊಬೈಲ್ ಗೇಮ್. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಮಕ್ಕಳು ಈ ಗೇಮ್ಸ್ ಗೆ ಬಲಿಯಾಗುತ್ತಿರುವುದೇಕೆ ಗೊತ್ತಾ? ಈ ಗೇಮ್ಸ್ ಗೆ ಬಲಿಯಾಗಲು ಹೊರಟಿದ್ದ ಜೋಧ್ ಪುರದ ಬಾಲಕಿಯೊಬ್ಬಳು ಇದನ್ನು ಬಾಯ್ಬಿಟ್ಟಿದ್ದಾಳೆ. 17 ವರ್ಷದ ಬಾಲಕಿ ಬಿಎಸ್ ಎಫ್ ಯೋಧರೊಬ್ಬರ ಪುತ್ರಿ.ಈಕೆ ಈ ಗೇಮ್ಸ್ ಆಡುತ್ತಿದ್ದಳು. ಅಂತಿಮ ಸುತ್ತಿನಲ್ಲಿ ಆಕೆ ಎತ್ತರದಿಂದ ಜಿಗಿಯಬೇಕಿತ್ತು. ಅದಕ್ಕಾಗಿ ಮನೆ ಬಿಟ್ಟು ಹೊರಟಿದ್ದಳು.