ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಾರಣಾಂತಿಕ ಬ್ಲೂ ವೇಲ್ ಗೇಮ್ ರಾಜ್ಯಕ್ಕೂ ಕಾಲಿಟ್ಟಿದೆ. ಹುಬ್ಬಳ್ಳಿಯ ಶಾಲೆಯೊಂದರ 6ನೇ ತರಗತಿ ವಿದ್ಯಾರ್ಥಿನಿ ಬ್ಲೂವೇಲ್ ಗೇಮ್ ಆಟಕ್ಕೆ ಬಲಿಯಾಗಿ ಕೈ ಕುಯ್ದುಕೊಂಡ ಬಗ್ಗೆ ವರದಿಯಾಗಿದೆ. ತಕ್ಷಣವೇ ವಿದ್ಯಾರ್ಥಿನಿಯನ್ನ ಗಮನಿಸಿದ ಸಹಪಾಠಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಕ್ಷಕರು ಕರೆದು ವಿಚಾರಿಸಿ ಪೋಷಕರಿಗೆ ಮಾಹಿತಿ ನೀಡಿದ್ದು, ಎಚ್ಚೆತ್ತುಕೊಂಡಿದ್ದಾರೆ. 2013ರಲ್ಲಿ ರಷ್ಯಾದಲ್ಲಿ ಪ್ರಾರಂಭವಾದ ಈ ಗೇಮ್`ನಿಂದ ರಷ್ಯಾದಂತ ಮುಂದುವರೆದ ರಾಷ್ಟ್ರದಲ್ಲಿ 130ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.ಏನಿದು ಬ್ಲೂವೇಲ್