ಚಂಡೀಗಢ : 5 ಸ್ಟಾರ್ ಹೋಟೆಲ್ ಒಂದಕ್ಕೆ ಬಾಂಬ್ ಬೆದರಿಕೆ ಬಂದಿರುವ ಘಟನೆ ಹರಿಯಾಣದ ಗುರುಗ್ರಾಮದರಲ್ಲಿ ನಡೆದಿದೆ.ಬೆದರಿಕೆ ಹಿನ್ನೆಲೆ ಪೊಲೀಸರು ಹೋಟೆಲ್ನಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಗುರುಗ್ರಾಮದ ಆಂಬಿಯನ್ಸ್ ಮಾಲ್ ಕಾಂಪ್ಲೆಕ್ಸ್ನಲ್ಲಿರುವ ಲೀಲಾ ಹೋಟೆಲ್ಗೆ ಬೆಳಗ್ಗೆ 11:35ಕ್ಕೆ ದೂರವಾಣಿ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ.ಬೆದರಿಕೆ ಕರೆಯನ್ನು ಸ್ವೀಕರಿಸುತ್ತಲೇ ಹೋಟೆಲ್ನಲ್ಲಿದ್ದವರು ಭಯಭೀತರಾಗಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ