ನವದೆಹಲಿ: ತಾಯಿ ಅಕ್ರಮ ಸಂಬಂಧ ಮುಂದುವರಿಸಲು ಒಪ್ಪದೇ ಇದ್ದಿದ್ದಕ್ಕೆ ಆಕೆಯ ಮಗನನ್ನು ಪ್ರಿಯಕರ ಮತ್ತು ಸ್ನೇಹಿತರು ಸೇರಿಕೊಂಡು ಅಪಹರಿಸಿ ಹತ್ಯೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.ಆರೋಪಿಗಳಲ್ಲಿ ಒಬ್ಬಾತನಾಗಿರುವ ಪ್ರದೀಪ್ ಎಂಬಾತನ ಜೊತೆ ಮಹಿಳೆ ಸಂಬಂಧ ಹೊಂದಿದ್ದಳು. ಆದರೆ ಆತ ವಿವಾಹಿತನಾಗಿದ್ದ. ಹೀಗಾಗಿ ಆತನ ಪತ್ನಿಯ ಮನೆಯವರು ಆತನಿಂದ ಬೇರಾಗುವಂತೆ ಒತ್ತಡ ಹೇರಿದ್ದರು. ಹೀಗಾಗಿ ಮಹಿಳೆ ಆರೋಪಿ ಪ್ರದೀಪ್ ಬಳಿ ಪತ್ನಿಗೆ ವಿಚ್ಛೇದನ ನೀಡಿ ತನ್ನ ಜೊತೆ ಸಂಬಂಧ ಮುಂದುವರಿಸಲು ಹೇಳಿದ್ದರು.