ನವದೆಹಲಿ: ಸುಖೋಯ್ ಯುದ್ಧವಿಮಾನದ ಮೇಲಿಂದ ಇನ್ನಷ್ಟುದೂರ ಸಾಗಬಲ್ಲ ವಿಸ್ತರಿತ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪ್ರಯೋಗ ನಡೆಸಿದೆ. ಬ್ರಹ್ಮೋಸ್ ಮೂಲ ಕ್ಷಿಪಣಿ 290 ಕಿ.ಮೀ. ದೂರ ಸಾಗುತ್ತಿತ್ತು. ವಿಸ್ತರಿತ ಕ್ಷಿಪಣಿ 350 ಕಿ.ಮೀ. ದೂರ ಸಾಗುತ್ತದೆ. ಶಬ್ದಕ್ಕಿಂತ ವೇಗವಾಗಿ ನುಗ್ಗಿ ಶತ್ರುಪಡೆಗಳನ್ನು ಸದೆ ಬಡಿಯುವ, ವಿಶ್ವದ ಅತ್ಯಂತ ಅಪಾಯಕಾರಿ ಕ್ಷಿಪಣಿಗಳಲ್ಲಿ ಒಂದಾಗಿರುವ ಬ್ರಹ್ಮೋಸ್ ಕ್ಷಿಪಣಿಯ ದೀರ್ಘ ದೂರ ಕ್ರಮಿಸುವ ಆವೃತ್ತಿಯನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.