ರಾಂಚಿ: ಮದುವೆಯಾಗುವುದಕ್ಕೆ ಕೆಲವೇ ನಿಮಿಷಗಳ ಮೊದಲು ಮದುವೆ ಬೇಡವೆನ್ನುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಧು ಮದುವೆ ಶಾಸ್ತ್ರ ಅರ್ಧ ಮುಗಿದ ಬಳಿಕ ವರನನ್ನು ತೊರೆದಿದ್ದಾಳೆ. ವರನೊಂದಿಗೆ ಸಪ್ತಪದಿ ತುಳಿದ ಬಳಿಕ ಇನ್ನೇನು ಸಿಂಧೂರ ಶಾಸ್ತ್ರ ಮಾಡಬೇಕು ಎನ್ನುವಷ್ಟರಲ್ಲಿ ವಧು ನನಗೆ ವರ ಇಷ್ಟವಿಲ್ಲ, ಮದುವೆ ಬೇಡ ಎಂದು ಮಂಟಪ ಬಿಟ್ಟು ಹೊರಟಿದ್ದಾಳೆ. ಜಾರ್ಖಂಡ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.ವರ ಮತ್ತು ವಧುವಿನ ಮನೆಯವರು ಎಷ್ಟೇ ಬೇಡಿಕೊಂಡರೂ ವಧುವಿನ ಮನಸ್ಸು ಕರಗಲಿಲ್ಲ.