ವ್ಯಾಕ್ಸಿನ್ ಆದ ವರ ಬೇಕಾಗಿದ್ದಾನೆ! ಜಾಹೀರಾತು ಫುಲ್ ವೈರಲ್

ನವದೆಹಲಿ| Krishnaveni K| Last Modified ಬುಧವಾರ, 9 ಜೂನ್ 2021 (09:32 IST)
ನವದೆಹಲಿ: ಕೊರೋನಾ ವ್ಯಾಕ್ಸಿನೇಷನ್ ಪಡೆಯಲು ಜನರನ್ನು ಉತ್ತೇಜಿಸಲು ಸರ್ಕಾರ ಏನೇನೋ ಸರ್ಕಸ್ ಮಾಡುತ್ತಿದೆ. ಆದರೆ ಇದೀಗ ಎಷ್ಟು ಜನಪ್ರಿಯವಾಗಿದೆಯೆಂದರೆ ವೈವಾಹಿಕ ಅಂಕಣದಲ್ಲೂ ರಾರಾಜಿಸಿದೆ!

 
ಮಹಿಳೆಯೊಬ್ಬರು ತಮಗೆ ವರ ಬೇಕಾಗಿದ್ದಾನೆ ಎಂದು ಪತ್ರಿಕೆಯಲ್ಲಿ ಜಾಹೀರಾತು ಕೊಡುವಾಗ ಎರಡು ಡೋಸ್ ವ್ಯಾಕ್ಸಿನ್ ಪಡೆದ ವರನಾಗಿರಬೇಕು ಎಂದು ಷರತ್ತು ವಿಧಿಸಿದ್ದಾಳೆ!
 
ರೋಮನ್ ಕ್ಯಾಥೋಲಿಕ್ ಹುಡುಗಿಯಾಗಿರುವ ತಾನು ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ ಮಾಡಿರುತ್ತೇನೆ ಹಾಗೂ ಎರಡು ಡೋಸ್ ಕೊವಿಶೀಲ್ಡ್ ಲಸಿಕೆ ಪಡೆದಿರುತ್ತೇನೆ. ತನಗೆ ರೋಮನ್ ಕ್ಯಾಥೋಲಿಕ್ ಪಂಗಡದ ಎರಡು ಡೋಸ್ ಕೊರೋನಾ ವ್ಯಾಕ್ಸಿನ್ ಪಡೆದ ಹುಡುಗನೇ ಬೇಕು ಎಂದು ಜಾಹೀರಾತು ನೀಡಲಾಗಿದೆ. ಇದು ಕಾಂಗ್ರೆಸ್ ಸಂಸದ ಶಶಿ ತರೂರ್ ಗಮನಕ್ಕೂ ಬಂದಿದ್ದು, ಇಂತಹದ್ದೊಂದು ಷರತ್ತು ಮುಂದಿನ ದಿನಗಳಲ್ಲಿ ಸಾಮಾನ್ಯವಾಗಲಿದೆ ಎಂದು ಹಾಸ್ಯ ಮಾಡಿದ್ದಾರೆ. ಅಂತೂ ಈ ಜಾಹೀರಾತು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :