ನವದೆಹಲಿ: ಸದಾ ಗಡಿಯಲ್ಲಿ ಅಪ್ರಚೋದಿತ ಗುಂಡಿನ ಮಳೆಗರೆಗೈದು ಪ್ರಾಣ ತೆಗೆಯುವ ಪಾಕಿಸ್ತಾನ ಯೋಧರಿಗೆ ಗಣರಾಜ್ಯೋತ್ಸವ ಸಿಹಿ ನೀಡಲು ಭಾರತೀಯ ಯೋಧರು ನಿರಾಕರಿಸಿದ್ದಾರೆ. ಸಾಮಾನ್ಯವಾಗಿ ಉಭಯ ದೇಶಗಳ ಸೈನಿಕರು ಈದ್ ಮಿಲಾದ್, ಸ್ವಾತಂತ್ರ್ಯೋತ್ಸವ ಮುಂತಾದ ಹಬ್ಬ, ವಿಶೇಷ ಸಂದರ್ಭಗಳಲ್ಲಿ ವಾಘಾ ಗಡಿಯಲ್ಲಿ ಸಿಹಿ ಹಂಚಿ ಶುಭ ಹಾರೈಸುತ್ತಾರೆ. ಆದರೆ ಈ ಬಾರಿ ಗಡಿಯಲ್ಲಿ ಪಾಕ್ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಸಿಟ್ಟಿಗೆದ್ದಿರುವ ಬಿಎಸ್ಎಫ್ ಯೋಧರು ಸಿಹಿ ನೀಡದೇ ಇರಲು ತೀರ್ಮಾನಿಸಿದ್ದರು.ಅದರಂತೆ