ನವದೆಹಲಿ: ಕೇಂದ್ರ ಸರಕಾರದ ಬುಲೆಟ್ ರೈಲು ಯೋಜನೆ ಕೂಡಾ ನೋಟು ನಿಷೇಧದಂತಹ ನಡೆಯಾಗಿದ್ದು ಸರ್ವನಾಶ ಮಾಡಲಿದೆ. ಬುಲೆಟ್ ರೈಲು ಯೋಜನೆ ಕೈ ಬಿಟ್ಟು ರೈಲು ಸುರಕ್ಷತೆಗೆ ಹೆಚ್ಚಿನ ಹಣ ವ್ಯಯ ಮಾಡುವುದು ಸೂಕ್ತ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.