ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್.ಕೆ.ನಗರ್ ವಿಧಾನಸಭೆ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎಐಎಡಿಎಂಕೆ ಪಕ್ಷದ ಬಂಡಾಯ ಅಭ್ಯರ್ಥಿ ದಿನಕರನ್ ವಿರುದ್ಧ ತೊಡೆತಟ್ಟಿದ್ದ ಎಐಎಡಿಎಂಕೆ, ಡಿಎಂಕೆ, ಮತ್ತು ಬಿಜೆಪಿ ಹೀನಾಯ ಸೋಲನುಭವಿಸಿವೆ. ದಿನಕರನ್ ನೀಡಿದ ಏಟಿಗೆ ವಿಪಕ್ಷಗಳು ತತ್ತರಿಸಿವೆ. ಇಂದು ಬೆಳಿಗ್ಗೆ ಮತಏಣಿಕೆ ಆರಂಭವಾಗುತ್ತಿದ್ದಂತೆ ಮುನ್ನಡೆ ಸಾಧಿಸಿದ್ದ ದಿನಕರನ್ ಕೊನೆಯವರೆಗೂ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.ದಿನಕರನ್ಗೆ 89 ಸಾವಿರ ಮತಗಳು ಬಂದರೆ, ಎಐಎಡಿಎಂಕೆ ಅಭ್ಯರ್ಥಿ