ಒಂದನೇ ಡೋಸ್ ಕೊವಿಶೀಲ್ಡ್, ಎರಡನೇ ಡೋಸ್ ಕೊವ್ಯಾಕ್ಸಿನ್ ಪಡೆಯಬಹುದೇ?

ಬೆಂಗಳೂರು| Krishnaveni K| Last Modified ಬುಧವಾರ, 2 ಜೂನ್ 2021 (09:22 IST)
ಬೆಂಗಳೂರು: ಕೊರೋನಾ ವಿರುದ್ಧ ವ್ಯಾಕ್ಸಿನ್ ಪಡೆಯುವಾಗ ಮೊದಲನೇ ಡೋಸ್ ಕೊವಿಶೀಲ್ಡ್ ಎರಡನೇ ಡೋಸ್ ಕೊವ್ಯಾಕ್ಸಿನ್ ಪಡೆಯಬಹುದೇ? ಇದಕ್ಕೆ ಕೇಂದ್ರ ಸ್ಪಷ್ಟನೆ ನೀಡಿದೆ.

 
ಎರಡೂ ಡೋಸ್ ಗಳೂ ಒಂದೇ ಆಗಿರಬೇಕೇ ಅಥವಾ ಕೊವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಯಾವುದಾದರೂ ಪರಿಣಾಮಕಾರಿಯಾಗುತ್ತದೆಯೇ ಎಂಬ ಬಗ್ಗೆ ಜನರಲ್ಲಿ ಗೊಂದಲವಿದೆ.
 
ಇದರ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಿದ್ದು, ಎರಡೂ ಡೋಸ್ ಗಳಲ್ಲಿ ಬೇರೆ ಬೇರೆ ಔಷಧ ಪಡೆದರೆ ಅದು ಪರಿಣಾಮಕಾರಿಯಾಗಬಹುದು ಎಂದು ವೈಜ್ಞಾನಿಕವಾಗಿ ಸ್ಪಷ್ಟವಾಗುವವರೆಗೂ ಆ ರೀತಿ ವ್ಯತ್ಯಸ್ಥ ಔಷಧ ನೀಡಲ್ಲ. ಒಮ್ಮೆ ಕೊವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಪಡೆದರೆ ಎರಡನೇ ಡೋಸ್ ನಲ್ಲಿಯೂ ಅದೇ ಔಷಧವನ್ನೇ ನೀಡಲಾಗುತ್ತದೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ಇದರಲ್ಲಿ ಇನ್ನಷ್ಟು ಓದಿ :