ಅಹಮ್ಮದಾಬಾದ್: ಉದ್ಯೋಗಸ್ಥ ದಂಪತಿ ಮಗುವನ್ನು ನೋಡಿಕೊಳ್ಳಲು ನೇಮಿಸಿದ್ದ ಪಾಲಕಿ ಮಗುವಿಗೆ ಚಿತ್ರಹಿಂಸೆ ನೀಡಿದ ಪರಿಣಾಮ ಮಗುವಿನ ಸ್ಥಿತಿ ಗಂಭೀರವಾಗಿದೆ.ಗುಜರಾತ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮಗು ಪ್ರತಿನಿತ್ಯ ಅಳುತ್ತಿರುವ ಸದ್ದು ಕೇಳಿಸಿಕೊಂಡ ನೆರೆಹೊರೆಯವರು ದಂಪತಿಗೆ ಮಾಹಿತಿ ನೀಡಿದ್ದರು. ಅದರಂತೆ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದ ದಂಪತಿ ತಾವಿಲ್ಲದ ವೇಳೆ ಮನೆಯಲ್ಲಿ ಏನಾಗುತ್ತಿದೆ ಎಂದು ಪರಿಶೀಲಿಸಿದ್ದರು.ಈ ವೇಳೆ ಪಾಲಕಿ ಮಗುವಿಗೆ ಹೊಡೆಯುವುದು, ತಲೆಯನ್ನು ಹಾಸಿಗೆಗೆ ಕುಕ್ಕುವುದು, ಕೂದಲು ಹಿಡಿದೆಳೆದು ವಿಚಿತ್ರವಾಗಿ ಹಿಂಸೆ ನೀಡುವುದು