ಕೊನೆಯುಸಿರೆಳೆದ ಮ್ಯಾಂಡೋಲಿನ್‌ ಶ್ರೀನಿವಾಸ್‌

ಚೆನ್ನೈ, ಶುಕ್ರವಾರ, 19 ಸೆಪ್ಟಂಬರ್ 2014 (17:07 IST)

ಮ್ಯಾಂಡೋಲಿನ್ ಶ್ರೀನಿವಾಸ್  ಎಂದೇ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಮಹಾನ್‌  ಮ್ಯಾಂಡೊಲಿನ್‌ ವಾದಕ, ಸಂಗೀತಗಾರ ಯು.ಶ್ರೀನಿವಾಸ್‌ ಶುಕ್ರವಾರ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ವರ್ಷ ವಯಸ್ಸಾಗಿತ್ತು. 

ಲಿವರ್ ಸಮಸ್ಯೆಯಿಂದಾಗಿ ಕೆಲ ದಿನಗಳ ಹಿಂದೆ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್‌, ಶುಕ್ರವಾರ ಬೆಳಗ್ಗೆ ಸುಮಾರು 9.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಆಂಧ್ರಪ್ರದೇಶದ ಪಲಕೊಲು ಎಂಬಲ್ಲಿ 1969ರ ಫೆಬ್ರವರಿ 29ರಂದು ಜನಿಸಿದ್ದ  ಶ್ರೀನಿವಾಸ್‌ 6 ರ ಪ್ರಾಯದಲ್ಲೇ ಮ್ಯಾಂಡೋಲಿನ್‌ ನುಡಿಸುವಲ್ಲಿ ಪರಿಣತಿ ಸಾಧಿಸಿದ್ದರು. 9 ರ ಪ್ರಾಯದಲ್ಲೇ ಮೊದಲ ಸಾರ್ವಜನಿಕ ಸಂಗೀತ ಕಚೇರಿ ನಡೆಸಿ ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಅವರು ನೋಡ ನೋಡುತ್ತಿದ್ದಂತೆಯೇ ಮ್ಯಾಂಡೋಲಿನ್‌ ಕ್ಷೇತ್ರದ ಉಜ್ವಲ ತಾರೆಯಾಗಿ ಬೆಳೆದು ನಿಂತರು.  
 
ಜಾಗತಿಕ ಸಂಗೀತಗಾರರಾದ ಜಾನ್ ಮೆಕ್ಲಾಗ್ಲಿನ್, ಮೈಕೆಲ್ ನೈಮನ್ ಮತ್ತು ಮೈಕೆಲ್ ಬ್ರೂಕ್‌ರಂಥ ಘಟಾನುಘಟಿಗಳ ಮೆಚ್ಚುಗೆ ಗಳಿಸಿದ್ದ ಶ್ರೀನಿವಾಸ್‌, ಸಣ್ಣ ವಯಸ್ಸಲ್ಲೇ ಪದ್ಮಶ್ರೀ(1998) ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ(2010)  ಪಡೆದಿದ್ದರು.  
 
ಪ್ರತಿಷ್ಠಿತ ಸಂಗೀತಾ ರತ್ನ ಪ್ರಶಸ್ತಿಯಿಂದಲೂ ಅವರು ಪುರಸ್ಕೃತರಾಗಿದ್ದಾರೆ.
 
ಅವರು ತಮ್ಮ ತಂದೆ ಹಾಗೂ ಸೋದರ (ಪ್ರಖ್ಯಾತ ಮಾಂಡೋಲಿನ್ ವಾದಕ) ಮ್ಯಾಂಡೊಲಿನ್‌ ಯು.ರಾಜೇಶ್‌ರನ್ನು ಶ್ರೀನಿವಾಸ್‌ ಅಗಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಸ್ಕಾನ್ ಊಟ ಸೇವಿಸಿ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಬೆಂಗಳೂರು: ಡಿ.ಜೆ. ಹಳ್ಳಿಯ ಮೋದಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಇಸ್ಕಾನ್ ಊಟ ಸೇವಿಸಿ ...

news

ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ,ದೇಶಕ್ಕಾಗಿ ಪ್ರಾಣ ಕೊಡುತ್ತಾರೆ: ಮೋದಿ

ಪ್ರಧಾನಿಯಾದ ನಂತರ ಪ್ರಥಮ ಅಂತರಾಷ್ಟ್ರೀಯ ಸಂದರ್ಶನವನ್ನೆದುರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶಿಯ ...

news

ಗಾಂಧಿ ಹುಟ್ಟಿದ ದಿನ ಗೊತ್ತಿಲ್ಲದ ಶಿಕ್ಷಕರಿಗೆ ಕಿಮ್ಮನೆ ಕ್ಲಾಸ್ ತಗೊಂಡ್ರು ಸುಮ್ಮನೆ

ಬೆಂಗಳೂರು: ವರ್ಗಾವಣೆ ಕೇಳಲು ಬಂದ ಕೋಲಾರ ಮೂಲದ ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಕಿಮ್ಮನೆ ...

news

Xi ('ಕ್ಸಿ) ಯನ್ನು ಇಲೆವನ್ ಎಂದು ಓದಿದ್ದಕ್ಕೆ ಕೆಲಸ ಕಳೆದಕೊಂಡ ನಿರೂಪಕ

ತಡ ರಾತ್ರಿ ಸುದ್ದಿ ಓದುತ್ತಿದ್ದ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ( Xi) ಜಿನ್‌ಪಿಂಗ್ ಹೆಸರನ್ನು ...