ಮಧ್ಯಪ್ರದೇಶ : ಕೋಳಿಯ ಮೇಲೆ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಮಹಿಳೆಯ 8 ವರ್ಷದ ಮಗು ಆಟವಾಡುತ್ತಿದ್ದಾಗ ಕೋಳಿ ಬಂದು ತನ್ನ ಕೊಕ್ಕಿನಿಂದ ಕಚ್ಚಿ ಗಾಯಮಾಡಿದೆಯಂತೆ. ಇದರಿಂದ ಕೋಪಗೊಂಡ ಮಹಿಳೆ ಕೋಳಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಹಿನ್ನಲೆಯಲ್ಲಿ ಪೊಲೀಸರು ಕೋಳಿ ಮಾಲೀಕರಿಗೆ ಪೊಲೀಸ್ ಠಾಣೆಗೆ ಬರುವಂತೆ ಹೇಳಿ ವಿಚಾರಣೆ ನಡೆಸಿದ್ದು,ಮಾಲೀಕರು ತಮ್ಮ ಕೋಳಿ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಾಜಾ