ತನ್ನ ವಂಶವೃಕ್ಷವನ್ನು ಬೆಳೆಸುವ ಕನಸು ಬಹುತೇಕರದ್ದು, ಆದರೆ ಕೆಲವರಿಗೆ ಈ ಯೋಗ ಇರುವುದಿಲ್ಲ.ಆದರೆ ಈ ಆಧುನಿಕ ಯುಗದಲ್ಲಿ ಮಕ್ಕಳನ್ನು ಪಡೆಯಲು ಬಹುತೇಕರು ಇಷ್ಟ ಪಡುವುದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯವೇ. ಈ ಮಧ್ಯೆ ತಾಯಿಯೊಬ್ಬರು ತನ್ನ ಮಗ ಹಾಗೂ ಸೊಸೆಯ ವಿರುದ್ಧ ಮಕ್ಕಳು ಮಾಡಿಕೊಳ್ಳುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.ಅಲ್ಲದೇ ಐದು ಕೋಟಿ ಪರಿಹಾರ ನೀಡುವಂತೆ ಅವರು ಆಗ್ರಹಿಸಿದ್ದಾರೆ. ತನ್ನ ವಂಶದ ಅಂತ್ಯವಾಗುತ್ತಿದೆ ಹಾಗೂ ಇದೇ ಕಾರಣಕ್ಕೆ ಜನರು ತನ್ನ ಬಗ್ಗೆ ಕೀಳಾಗಿ