ನವದೆಹಲಿ: ಸಿಬಿಎಸ್ಇ ಜಾರಿಗೆ ತಂದಿದ್ದ ಗ್ರೇಸ್ ಮಾರ್ಕ್ಸ್ ಪದ್ಧತಿಗೆ ದೆಹಲಿ ಹೈಕೋರ್ಟ್ ತಡೆ ನೀಡಿದ್ದರಿಂದ ತಡವಾಗಿದ್ದ ಸಿಬಿಎಸ್ಇ 10 ಮತ್ತು 12 ನೇ ತರಗತಿಗಳ ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗುವ ನಿರೀಕ್ಷೆಯಿದೆ. ಇದರಿಂದಾಗಿ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ ದಿನದ ಬಗ್ಗೆ ಇದ್ದ ಗೊಂದಲಗಳೂ ನಿವಾರಣೆಯಾಗಲಿವೆ. ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸದೇ ಇರಲು ನಿರ್ಧರಿಸಿದೆ.ಹೀಗಾಗಿ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಲ್ಲಿದ್ದ ಗೊಂದಲ ನಿವಾರಣೆಯಾಗಿದೆ. ಶನಿವಾರ ಸಿಬಿಎಸ್ಇ